ಫೀನಿಕ್ಸ್ ದ್ವೀಪಗಳು
	ಪೆಸಿಫಿಕ್ ಸಾಗರದ ಪಶ್ಚಿಮ ಮಧ್ಯಭಾಗದಲ್ಲಿರುವ ಎಂಟು ಚಿಕ್ಕ ಹವಳದ ಅಡಲು ಕೂಟ ಹವಾಯಿಯಿಂದ ನೈಋತ್ಯಕ್ಕೆ 2650 ಕಿಮೀ ದೂರದಲ್ಲಿ .ದ.ಅ. 40 ಪ.ರೇ 172º ಮೇಲೆ ಇದೆ. ವಿಸ್ತೀರ್ಣ 17.6 ಕಿಮೀ 19ನೆಯ ಶತಮಾನದಲ್ಲಿ ಇದು ಪತ್ತೆಯಾಯಿತು. 1889ರಲ್ಲಿ ಬ್ರಿಟನ್ ಇದನ್ನು ವಶಪಡಿಸಿಕೊಂಡಿತು. ಈಗ ಈ ದ್ವೀಪ ಸಮೂಹ ಗಿಲ್‍ಬರ್ಟ್ ಮತ್ತು ಎಲ್ಸೀದ್ವೀಪ ವಸಾಹತಿನ ಭಾಗವಾಗಿದ್ದು ಅಮೆರಿಕ ಮತ್ತು ಬ್ರಿಟನ್ನುಗಳ ಜಂಟಿ ನಿಯಂತ್ರಣದಲ್ಲಿದೆ.	
(ಡಿ.ಎಸ್.ಜೆ.)